ಸಹಾಯ
ಈ ಪುಸ್ತಕ ವೆಬ್ ತಾಣದಲ್ಲಿ ನೀವು ಪುಸ್ತಕಗಳನ್ನು ಹುಡುಕಿಕೊಳ್ಳುವುದು ಹೇಗೆ
ಮೊದಲನೆಯದಾಗಿ ನೀವು ’ಹೆಚ್ಚಿನ ಹುಡುಕು’ ಕೊಂಡಿಗೆ ಹೋಗಬೇಕಾಗುತ್ತದೆ. ಅಲ್ಲಿ ನಿಮಗೆ ಮೂರು ಆಯ್ಕೆಗಳು ಸಿಗುತ್ತವೆ. ನೀವು ಶೀರ್ಷಿಕೆ, ಲೇಖಕರು ಹಾಗೂ ಪ್ರಕಾಶಕರು ಈ ಮೂರರಲ್ಲಿ ಒಂದು ವರ್ಗದಲ್ಲಿ ನೀವು ಹುಡುಕಬಹುದು. ಆಯಾ ವರ್ಗದ ಆಯ್ಕೆಯನ್ನು ನೀವು ಇಲ್ಲಿ ಟೈಪಿಸಿ ಹುಡುಕು ಅಥವಾ ಶೋಧಿಸು ಬಟನ್ನನ್ನು ಕ್ಲಿಕ್ಕಿಸಿ.
ನಿಮ್ಮ ಕಂಪ್ಯೂಟರ್ ಯುನಿಕೋಡ್ ಬಳಕೆ ಸಾಧ್ಯವಿದ್ದಲ್ಲಿ ಇಂಸ್ಕ್ರಿಪ್ಟ್ ಕೀಬೋರ್ಡ್ ಬಳಸಿ ಟೈಪಿಸ ಬಹುದು. (ಎಕ್ಸ್‌ಪಿ ಹಾಗೂ ನಂತರದ ವಿಂಡೋ ಆವೃತ್ತಿಗಳಲ್ಲಿ ಹಾಗೂ ಬಹಳಷ್ಟು ಲಿನಕ್ಸ್ ಅನ್ವಯಕಗಳಲ್ಲಿ ಯೂನಿಕೋಡ್ ಲಭ್ಯವಿದೆ- ಈ ಬಗೆಗೆ ವೆಬ್‌ನಲ್ಲಿ ಮಾಹಿತಿಯೂ ಸಿಕ್ಕುತ್ತದೆ.) ಪರ್ಯಾಯವಾಗಿ ನೀವು ಬರಹIME ಬಳಸಿ ನುಡಿ ಕೀಬೋರ್ಡ್ ಅಥವಾ ಬರಹ ಕೀ ಬೋರ್ಡ್‌ಗಳಲ್ಲಿ ಟೈಪಿಸ ಬಹುದು ಸಹ. (ಲಿಂಕ್ ವಿಳಾಸ http://www.baraha.com/BarahaIME.htm) ಇವೆರಡೂ ಫೋನೆಟಿಕ್ ಅಥವಾ ಇಂಗ್ಲೀಷ್ ಆಧಾರದ ಕೀಲಿ ಮಣೆಗಳು.
ಹೀಗೆ ಹುಡುಕಿಕೊಂಡ ಫಲಿತಾಂಶಗಳು ಪಟ್ಟಿಯಾಗಿ ಕಾಣಿಸಿಕೊಳ್ಳುತ್ತವೆ. ಅಲ್ಲಿ ನಿಮಗೆ ಹೆಚ್ಚಿನ ವಿವರದ ಆಯ್ಕೆಯೂ ಇರುತ್ತದೆ. ಅದನ್ನು ಕ್ಲಿಕ್ಕಿಸಿದಲ್ಲಿ ನಿಮಗೆ ಪುಸ್ತಕದ ಬಗೆಗಿನ ಹೆಚ್ಚಿನ ಮಾಹಿತಿ ಕಾಣಬರುತ್ತದೆ.
ಈ ಪುಸ್ತಕ ತಾಣದಲ್ಲಿ ಪುಸ್ತಕಗಳನ್ನು ಕೊಳ್ಳುವುದು ಹೇಗೆ
ಮೊದಲನೆಯದಾಗಿ ನೀವು ಕೊಳ್ಳಬೇಕೆಂದಾದಲ್ಲಿ ಈ ವೆಬ್ ತಾಣದಲ್ಲಿ ನೊಂದಾಯಿಸಬೇಕಾಗುತ್ತದೆ. ಒಮ್ಮೆ ನೊಂದಾಯಿಸಿದ ನಂತರ ನೀವು ನಿಮ್ಮ ನೊಂದಾಯಿತ ಹೆಸರು ಹಾಗೂ ಪಾಸ್ ಪದ ನೆನಪಿಟ್ಟುಕೊಳ್ಳಿ. ನೀವು ಮತ್ತೆ ಮತ್ತೆ ನೊಂದಾಯಿಸಬೇಕಾಗಿಲ್ಲ. ನಿಮ್ಮ ಪಾಸ್ ಪದ ಮರೆತು ಹೋದರೆ ನೀವು ಮಾಡಬೇಕಾಗುದುದು ಇಷ್ಟೆ, ನಿಮ್ಮ ಇ-ಮೇಲ್ ವಿಳಾಸವನ್ನು ಕೊಟ್ಟು ಪಾಸ್ ಪದ ಕಳುಹಿಸಿಕೊಡುವಂತೆ ವಿನಂತಿಸುವುದು. ನಿಮ್ಮ ಪಾಸ್ ಪದವನ್ನು ನಿಮ್ಮ ಇ-ಮೇಲ್ ಗೆ ಕಳುಹಿಸಿ ಕೊಡಲಾಗುತ್ತದೆ.
ಮೇಲೆ ಹೇಳಿದಂತೆ ನೊಂದಾಯಿಸಿದ ನಂತರ ನೀವು ಕೊಳ್ಳಬೇಕೆಂದಿರುವ ಪುಸ್ತಕವನ್ನು ಶಾಪಿಂಗ್ ಕಾರ್ಟ್‌ಗೆ ಸೇರಿಸಬಹುದು. ಶಾಪಿಂಗ್ ಕಾರ್ಟ್ ನಲ್ಲಿ ನಿಮಗೆ ಪುಸ್ತಕದ/ಗಳ ಬೆಲೆಯೊಂದಿಗೆ ಅಂಚೆ ವೆಚ್ಚವೂ ಸೇರಿಕೊಂಡ ಮೊತ್ತವೊಂದು ಕಾಣಿಸಿಕೊಳ್ಳುತ್ತದೆ. ನಿಮಗೆ ಒಂದಕ್ಕಿಂತ ಹೆಚ್ಚಿನ ಪ್ರತಿ ಅಗತ್ಯವಾದಲ್ಲಿ ಶಾಪಿಂಗ್ ಕಾರ್ಟಿನ ’ಘಟಕಗಳ ಸಂಖ್ಯೆ’ (units ) ಕೆಳಗೆ ಇರುವ ’1’ ದನ್ನು ಹೆಚ್ಚಿಸಿ ನಿಮಗೆ ಎಷ್ಟು ಪುಸ್ತಕಗಳು ಬೇಕೋ ಅಷ್ಟರ ಸಂಖ್ಯೆ ನಮೂದಿಸಿ ಹಾಗೂ ಕೆಳಗಿರುವ ’ಶಾಪಿಂಗ್ ಕಾರ್ಟ್ ಹೊಸದಾಗಿಸಿ’ ( update) ಬಟನ್ನನ್ನು ಕ್ಲಿಕ್ಕಿಸಿ. ಶಾಪಿಂಗ್ ಕಾರ್ಟ್ ನಲ್ಲಿ ಸೇರಿಸಿದ ಪುಸ್ತಕಗಳನ್ನು ತೆಗೆದು ಹಾಕುವ ಅನುಕೂಲತೆಯೂ ಇದೆ. ಇದಕ್ಕೆ ನೀವು ’ತೆಗೆದು ಹಾಕಿ’ (remove ) ಅನ್ನು ಕ್ಲಿಕ್ಕಿಸಿ.
ನಿಮಗೆ ಇಲ್ಲಿ ದೊರಕುವ ಆಯ್ಕೆಗಳು ಒಂದೂ ಶಾಪಿಂಗ್ ಮುಗಿಸುವುದು. ಇದಕ್ಕೆ ’ಶಾಪಿಂಗ್ ಮುಗಿಸಿ’ ( ) ಬಟನ್ನನ್ನು ಕ್ಲಿಕ್ಕಿಸಿ. ಹೆಚ್ಚಿನ ಪುಸ್ತಕಗಳನ್ನು ಶಾಪಿಂಗ್ ಮಾಡಲು "ಶಾಪಿಂಗ್ ಮುಂದುವರೆಸಿ" (continue shopping) ಬಟನ್ನನ್ನು ಕ್ಲಿಕ್ಕಿಸಿ. ಇದು ನಿಮಗೆ ಆರ್ಡರ್ ಪುಟಕ್ಕೆ ತೆಗೆದುಕೊಂಡು ಹೋಗುತ್ತದೆ.
ಆರ್ಡರ್ ಮಾಡುವುದು ಹೇಗೆ?
ನೀವು ಆರ್ಡರ್ ಮಾಡುವಾಗ ನಿಮ್ಮ ಹೆಸರು ಇತರ ವಿವರಗಳನ್ನು ಕೊಡಿ. ಲಾಗಿನ್ ಹೆಸರಿನಂತಲ್ಲದೆ ಇಲ್ಲಿ ನಿಮ್ಮ ಪೂರ್ಣ ಹೆಸರು, ವಿಳಾಸಗಳನ್ನು ನೀಡಬೇಕು. ಇದು ನಿಮಗೆ ಆರ್ಡರ್ ಮಾಡಿದ ಪುಸ್ತಕಗಳನ್ನು ಅಂಚೆಯಲ್ಲಿ ಕಳುಹಿಸಲು ಸಹಾಯವಾಗುತ್ತದೆ.
ನೀವು ನಿಮ್ಮ ಸ್ನೆಹಿತರಿಗೂ (ಅವರ ಹೆಸರು ಹಾಗೂ ವಿಳಾಸಗಳನ್ನು ನೀಡಿ) ಹೀಗೆ ಪುಸ್ತಕಗಳನ್ನು ಕಳುಹಿಸಬಹುದು.
ಕೆಳಗೆ ನಿಮಗೆ ಟ್ರ್ಯಾಕಿಂಗ್ ಸಂಖ್ಯೆ ಕಂಡುಬರುತ್ತದೆ. ಅದನ್ನು ಕೆಳಗೆ ಇರುವ ಚೌಕದಲ್ಲಿ ಟೈಪಿಸಿ "ಆರ್ಡರ್ ಕಳುಹಿಸಿ" (send order) ಬಟನ್ನನ್ನು ಕ್ಲಿಕ್ಕಿಸಿ. ಅಲ್ಲದೆ ಈ ಟ್ರ್ಯಾಕರ್ ಸಂಖ್ಯೆಯನ್ನು ಗುರುತಿಟ್ಟುಕೊಳ್ಳಿ. ಮುಂದೆ ನಿಮ್ಮ ಆರ್ಡರ್ ಬಗೆಗೆ ವ್ಯವಹರಿಸಲು ಇದು ಉಪಯುಕ್ತ.
ನಿಮ್ಮ ಆರ್ಡರ್ ಮೊತ್ತ ಪಾವತಿ ಮಾಡುವುದು ಹೇಗೆ?
ನೀವು ಎರಡು ರೀತಿಯಲ್ಲಿ ಹಣ ಪಾವತಿ ಮಾಡಬಹುದು. ಒಂದನೆಯದಾಗಿ ಡಿ.ಡಿ. ಮೂಲಕ ಡಿ.ಡಿ.ಯನ್ನು ’ಅರಿವು ಟ್ರೇಡಿಂಗ್ ಕಂಪನಿ’ ಪರವಾಗಿ ಬಳ್ಳಾರಿಯ ಮೇಲೆ ತೆಗೆದುಕೊಳ್ಳಿ. ಅದರ ಹಿಂದೆ ನಿಮ್ಮ ಹೆಸರು (ಆರ್ಡರ್ ಫಾರಂನಲ್ಲಿ ನಮೂದಿಸಿದಂತೆ) ಹಾಗೂ ಟ್ರ್ಯಾಕರ್ ಸಂಖ್ಯೆಯನ್ನು ನಮೂದಿಸಿ ಹಾಗೂ ಅಲ್ಲಿ ನಮೂದಿಸಿದ ಅರಿವು ಟ್ರೇಡಿಂಗ್ ಕಂಪನಿ ವಿಳಾಸಕ್ಕೆ ಕಳುಹಿಸಿ. ಡಿ.ಡಿ. ಗೆ ಬದಲಾಗಿ ನೀವು ಎಂ. ಎಂ. ಒ ಕಳುಹಿಸಿಯೂ ಇದೇ ವಿಳಾಸಕ್ಕೆ ಕಳುಹಿಸಿ ಪುಸ್ತಕಗಳನ್ನು ತರಿಸಿಕೊಳ್ಳಬಹುದು.
ಸಾಮಾನ್ಯವಾಗಿ ನಿಮ್ಮ ಹಣ ತಲುಪಿದ ಮೂರು ಕೆಲಸದ ದಿನಗಳಲ್ಲಿ ನೀವು ಆರ್ಡರ್ ಮಾಡಿದ ಪುಸ್ತಗಳನ್ನು ಅಂಚೆಗೆ (ಅಥವಾ ಕೊರಿಯರ್ ಗೆ ಹಾಕಲು ಸಾಧ್ಯವಾಗುತ್ತದೆ).
ಸೂಚನೆ: ಕೊಳ್ಳುವ ಮುಂಚೆ ನಿಯಮ ನಿಬಂಧನೆಗಳನ್ನು ದಯವಿಟ್ಟು ಓದಿ
|